![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬೆಂಗಳೂರು: ಅಕಾಲಿಕ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದೆ. 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ 80 ರೂಗೆ ಏರಿಕೆಯಾಗಿದೆ. ಬೀನ್ಸ್, ಸೋಪ್ಪುಗಳು ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಏರಿಕೆ ಕಂಡಿದೆ. ಹೀಗೆ ಮಳೆ ಮುಂದುವರೆದರೆ ತರಕಾರಿಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯಾತೆ ಇದೆ ಎನ್ನಲಾಗುತ್ತಿದೆ. ಮಳೆ ಹಿನ್ನೆಲೆ ತರಕಾರಿ ಬೆಳೆ ಬೆಳೆಯಲು ಸಮಸ್ಯೆಯಾಗುತ್ತಿದೆ. ಇನ್ನು ಕೆಲವೆಡೆ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೊಲ, ಗದ್ದೆಗಳು ಕೆರೆಯಂತಾಗುತ್ತಿವೆ. ಹೀಗಾಗಿ ಬೆಳೆ ಬೆಳೆಯಲು ಸಮಸ್ಯೆಯಾಗಿದ್ದು ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗುತ್ತಿದೆ. ಮಾರುಕಟ್ಟೆಗೆ ತರಕಾರಿಗಳು ಹೆಚ್ಚಾಗಿ ಬರದ ಕಾರಣ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ಬಾಯ್ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ. ಹೀಗೆ ಬೆಲೆ ಏರಿಕೆ ಮುಂದುವರೆದರೆ ಜೀವನ ಹೇಗೆ ಮಾಡೋದು ಅಂತ ಗ್ರಾಹಕರು ಪ್ರಶ್ನೆ ಮಾಡಿದ್ದಾರೆ.
ಇಂದಿನ ತರಕಾರಿಗಳ ಬೆಲೆ ಹೇಗಿದೆ?
ಬೀನ್ಸ್ -80 ರೂ
ಕ್ಯಾರೆಟ್ -80 ರೂ
ಬಿಟ್ ರೋಟ್ -30ರೂ
ಕ್ಯಾಪ್ಸಿಕಮ್ -60 ರೂ
ನವಿಲುಕೋಸು -40 ರೂ
ಬೆಂಡೆಕಾಯಿ -30 ರೂ
ಶುಂಟಿ -80 ರೂ
ಮೆಣಸಿನಕಾಯಿ -80ರೂ
ಟೋಮಾಟೋ -80ರೂ
ಮೂಲಂಗಿ -30ರೂ
ಈರುಳ್ಳಿ -20ರೂ
ಬದನೆಕಾಯಿ -40 ರೂ
ಕೊತ್ತಂಬರಿ ಸೊಪ್ಪು -40ರೂ
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist